ಸಂಕ್ರಮಣ ಧಾತುಗಳು
	ಪರಮಾಣು ಸಂಖ್ಯೆ 21-30, 39-48 ಮತ್ತು 72-80 ವ್ಯಾಪ್ತಿಯಲ್ಲಿ ಇರುವ ಲೋಹಧಾತುಗಳು (ಟ್ರಾನ್ಸಿಷನ್ ಎಲಿಮೆಂಟ್ಸ್). ಒಂದು ತುದಿಯಲ್ಲಿ ಗರಿಷ್ಠ ವಿದ್ಯುದ್ಧನಾತ್ಮಕ (ಎಲೆಕ್ಟ್ರೊಪಾಸಿóಟಿವ್) ಇನ್ನೊಂದು ತುದಿಯಲ್ಲಿ ಕನಿಷ್ಠ ವಿದ್ಯುದ್ಧನಾತ್ಮಕ ಧಾತುಗಳಿರುವ ಶ್ರೇಣಿಯಲ್ಲಿ ಇವು ಸಂಕ್ರಮಣಾತ್ಮಕ ಕೂಡಿಕೆಯಂತೆ (ಟ್ರಾನ್ಸಿಷನಲ್ ಲಿಂಕೇಜ್) ಇರುವುದರಿಂದ ಈ ಹೆಸರು. ಶ್ರೇಣಿಯ ಯಾವ ಧಾತುಗಳಲ್ಲಿ ಅನುಕ್ರಮವಾಗಿ 3ಜ, 4ಜ ಮತ್ತು 5ಜ ಉಪಚಿಪ್ಪುಗ ಳಲ್ಲಿ ಲಭ್ಯವಿರುವ 10 ಕಕ್ಷಕಗಳು (ಆರ್ಬಿಟಲ್ಸ್) ಕ್ರಮಾಗತವಾಗಿ ಭರ್ತಿಯಾಗುತ್ತವೋ ಅವನ್ನು ಮಾತ್ರ ಸಂಕ್ರಮಣ ಧಾತುಗಳೆಂದು ಪರಿಗಣಿಸಬೇಕೆಂಬುದು ಕೆಲವರ ಅಭಿಮತ. ಪರಮಾಣು ಸಂಖ್ಯೆ 71 ಮತ್ತು 103 ಧಾತುಗಳನ್ನು ಈ ವರ್ಗದವೆಂದು ಪರಿಗಣಿಸುವುದೂ ಉಂಟು. ಇವು 3 ಪ್ರತ್ಯೇಕ ಶ್ರೇಣಿಗಳಲ್ಲಿರುವುದರಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಶ್ರೇಣಿಯ ಸಂಕ್ರಮಣ ಧಾತುಗಳೆಂದು ಗುರುತಿಸುವುದು ವಾಡಿಕೆ. 

	ಇವುಗಳ  ಪರಮಾಣುಗಳಲ್ಲಿ  ನ್ಯೂಕ್ಲಿಯಸ್ಸಿನಿಂದ ಅತಿ ದೂರದ ಎಲೆಕ್ಟ್ರಾನುಗಳಿರುವುದು ಪ್ರಸಾಮಾನ್ಯವಾಗಿ s ಕಕ್ಷಕದಲ್ಲಿ, ಗರಿಷ್ಠ-ಶಕ್ತಿ ಎಲೆಕ್ಟ್ರಾನುಗಳಿರುವುದು ಜ ಕಕ್ಷಕಗಳಲ್ಲಿ (ಪ್ರಥಮ ಶ್ರೇಣಿಯ ಧಾತುಗಳಲ್ಲಿ 3ಜ, ದ್ವಿತೀಯದ್ದರಲ್ಲಿ 4ಜ ಮತ್ತು ತೃತೀಯದ್ದರಲ್ಲಿ 5ಜ). ಹೀಗಾಗಿ, ಹೊರಗಿನ s ಕಕ್ಷಕ ತುಂಬಿದಅನಂತರ ಒಳಗಿನ ಜ ಕಕ್ಷಕ  ತುಂಬುತ್ತದೆ. ಉದಾ: ಪ್ರಥಮ  ಶ್ರೇಣಿಯ  ಮೊದಲನೆಯ  ಧಾತು  Sಛಿ (3ಜ0 4s2). ಕೊನೆಯ ಧಾತು Zಟಿ (3ಜ10 4s2). ಮಧ್ಯದ ಧಾತುಗಳಲ್ಲಿ ಅನುಕ್ರಮವಾಗಿ ಎಲೆಕ್ಟ್ರಾನುಗಳು 3ಜ ಚಿಪ್ಪಿನಲ್ಲಿ ಭರ್ತಿಯಾಗುತ್ತವೆ. ಈ ಧಾತುಗಳ ನಡುವಿನ ಹೋಲಿಕೆ ವ್ಯತ್ಯಾಸಗಳಿಗೆ ಪ್ರಧಾನ ಕಾರಣ ಇದು.

	ಅಧಿಕ ಸಾಂದ್ರತೆ ಮತ್ತು ದ್ರವನ ಬಿಂದು, ಕಡಿಮೆ ಬಾಷ್ಪಸಂಮರ್ದ ಹಾಗೂ ಅತಿ ಕಾಠಿಣ್ಯ ಈ ಲೋಹಗಳ ವೈಶಿಷ್ಟ್ಯ. ಪ್ರಬಲ ಸಸಂಜನತೆಗೆ (ಕೊಹೀಸಿವ್‍ನೆಸ್) ಸಂಬಂಧಿಸಿದ ಈ ಗುಣಗಳು ಪ್ರತಿಯೊಂದು ಶ್ರೇಣಿಯ 3ನೆಯ ಸದಸ್ಯ ಧಾತುವಿನ ಆಸುಪಾಸಿನಲ್ಲಿ ಗರಿಷ್ಠವಾಗಿರುತ್ತವೆ. ಲೋಹೀಯ ಬಂಧಗಳು ಸುಲಭವಾಗಿ ರೂಪುಗೊಳ್ಳಲು ವಿಪುಲ ಅವಕಾಶಗಳಿರುವುದಕ್ಕೆ ಸಂಕ್ರಮಣ ಲೋಹಗಳು ಮಾತ್ರವಿರುವ ಅನೇಕ ಮಿಶ್ರಲೋಹಗಳಿರುವುದೇ ಸಾಕ್ಷಿ. ಇವಕ್ಕೆ ಸಂಯುಕ್ತಗಳಲ್ಲಿ ಬಹುವೇಲೆನ್ಸಿಗಳನ್ನು ಪ್ರದರ್ಶಿಸುವ ಪ್ರವೃತ್ತಿ ಇದೆ. ಶ್ರೇಣಿಗಳ ಆರಂಭಿಕ ಧಾತುಗಳ (Sಛಿ, ಙ, ಐu) ಗರಿಷ್ಠ ವೇಲೆನ್ಸಿ +3 ಇದ್ದುದು 5ನೆಯ ಧಾತುಗಳನ್ನು ತಲಪುವ ವೇಳೆಗೆ (ಒಟಿ, ಖಿಛಿ, ಖe) +8ಕ್ಕೆ ಏರಿರುತ್ತದೆ. ಭಾರ ಲೋಹಗಳಲ್ಲಿ ಈ ಗಳಿಕೆ ಸುಲಭವಾಗಿ ಆಗುತ್ತದೆ. ತದನಂತರ ವೇಲೆನ್ಸಿಗಳು ಕಡಿಮೆಯಾಗುತ್ತವೆ. ಅಂತಿಮ ಧಾತುಗಳ (ಅu, ಂg, ಂu) ಗರಿಷ್ಠ ವೇಲೆನ್ಸಿ +3. ಆರ್ಗನೊಮೆ ಟಾಲಿಕ್ ಸಂಯುಕ್ತಗಳಲ್ಲಿ ಋಣಾತ್ಮಕ ಉತ್ಕರ್ಷಣ ಸ್ಥಿತಿ ಇರುವುದುಂಟು.
	ಪತ್ರಶೀಲತೆ, ತನ್ಯತೆ, ಲೋಹೀಯ ಹೊಳಪು, ಉತ್ತಮ ವಿದ್ಯುತ್ ಮತ್ತು ಉಷ್ಣ ವಾಹಕತೆ ಮುಂತಾದ ಲೋಹಸಹಜ ಗುಣಗಳಿವೆ. ರೋಹಿತದ ಗೋಚರ ಭಾಗದ ಬೆಳಕನ್ನು ಅಪಶೋಷಿಸುತ್ತವೆ (ಅ್ಯಬ್ಸಾರ್ಬ್). ಕ್ರಿಯಾವರ್ಧಕಗಳಾಗಿ ವರ್ತಿಸುತ್ತವೆ. ಕ್ಷಾರ ಮತ್ತು ಕ್ಷಾರೀಯ ಭಸ್ಮ ಲೋಹಗಳಿಗಿಂತ ಕಡಿಮೆ ಕ್ರಿಯಾಶೀಲ ಅಪಕರ್ಷಣಕಾರಕಗಳಾಗಿ ವರ್ತಿಸುವ ಪ್ರವೃತ್ತಿ ಇದೆ. ಅಯಾನಿಕ್ ಮತ್ತು ಸಹವೇಲೆನ್ಸೀಯ ಬಂಧ ಇವೆರಡನ್ನೂ ಆನಯಾನುಗಳೊಂದಿಗೆ ಸಂದರ್ಭಾನುಸಾರ ರೂಪಿಸುತ್ತವೆ. ಫಲಿತ ಸಂಯುಕ್ತಗಳು ಸಾಮಾನ್ಯವಾಗಿ ಉಜ್ಜ್ವಲ ಬಣ್ಣದವು. ಇವುಗಳ  ಬಣ್ಣವನ್ನು  ಎಲೆಕ್ಟ್ರಾನು ಜೋಡಣೆಯ ಪರಿಭಾಷೆಯಲ್ಲಿ ವಿವರಿಸಬಹುದು. ಅನೇಕ ಸ್ಥಿರ ಸಂಕೀರ್ಣ ಅಯಾನುಗಳನ್ನು ರೂಪಿಸುತ್ತವೆ. ಬಹುತೇಕ ಅಯಾನು ಗಳಿಗೆ ಮತ್ತು ಸಂಯುಕ್ತಗಳಿಗೆ ವಿಶಿಷ್ಟ ಬಣ್ಣ ಮತ್ತು ಪ್ಯಾರಕಾಂತೀಯ ಗುಣ ಇರುತ್ತದೆ.

	ಭೂಚಿಪ್ಪಿನಲ್ಲಿ ಸಮೃದ್ಧವಾಗಿರುವ ಕಬ್ಬಿಣ, ಸತುವು ಮುಂತಾದ ಲೋಹಗಳು; ಚಿನ್ನ, ಬೆಳ್ಳಿ ಮುಂತಾದ ಅಮೂಲ್ಯ ವಿರಳ ಲೋಹಗಳು; ರ್ಹೀನಿಯಮಿನಂಥ ಅಪರಿಚಿತ ವಿರಳ ಲೋಹಗಳು; ಬೈಜಿಕ ವಿದಳನದಿಂದ ಮಾತ್ರ ದೊರಕುವ ಟೆಕ್ನೀಶಿಯಮ್ ಲೋಹ-ವೈವಿಧ್ಯಮಯ ಲೋಹಗಳ ವರ್ಗ ಸಂಕ್ರಮಣ ಧಾತುಗಳು. ಬಹೂಪಯೋಗೀ ಪದಾರ್ಥಗಳನ್ನು ತಯಾರಿಸುವ ಪೆಟ್ರೋಲಿಯಮ್ ಮತ್ತು ಪಾಲಿಥೀನ್ ಉದ್ಯಮ ಮುಂತಾದವುಗಳಲ್ಲಿ ಕ್ರಿಯಾವರ್ಧಕಗಳಾಗಿ ಹಾಗೂ ನಿತ್ಯಬಳಕೆಯ ಅನೇಕ ಪದಾರ್ಥಗಳ ಉತ್ಪಾದನೆಗೆ ಇವು ಅಥವಾ ಇವುಗಳ ಸಂಯುಕ್ತ ಗಳು ಆವಶ್ಯಕ. ಜೀವಿಗಳಲ್ಲಿ ಜರಗುವ ಕೆಲವು ಜೀವರಾಸಾಯನಿಕ ಪ್ರಕ್ರಿಯೆಗಳಿಗೂ ಇವು ಬೇಕು.
													*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ